ಮತ್ತೆ ಕಾಣದಿರು ನೀ 2020!🙏

ತುಂಬಿದ ಕಂಗಳ ವಿದಾಯ ನಿನಗೆ,
ಮತ್ತೆ ಕಾಣದಿರು ಓ 2020!

ದುಡಿವ ಕೈಗಳ ಕನಸಿನ ಕೆಲಸ ಕಸಿದೆ,
ದಿನದುಡುಮೆಯವರ ಹೊಟ್ಟೆಗೆ ಹೊಡೆದೆ,
ಬದುಕನು ಭರಿಸಲಾಗದ ಬವಣೆಯಾಗಿಸಿದೆ,
ನಗುವ ಕಂಗಳಲಿ ಕಂಬನಿಯ ತುಂಬಿದೆ,
ನೀನಾರಿಗಾದೆಯೇ ಓ 2020!

Continue reading

ಯೋಗ ತರಬೇತಿ ಶಿಬಿರ (ಆನ್‍ಲೈನ್) ದಿನಾಂಕ: 28-07-2020 ರಿಂದ 02-08-2020

ಯೋಗವು ಸಹಸ್ರಾರು ವರ್ಷಗಳ ಹಿಂದೆಯೇ ಭರತವರ್ಷದಲ್ಲಿ ರೂಪುಗೊಂಡ ಒಂದು ಪರಿಪೂರ್ಣ ವಿಜ್ಞಾನ. ಇದು ಸುಮಾರು ಕ್ರಿಸ್ತಪೂರ್ವ 3ನೇ ಶತಮಾನದಲ್ಲಿ ಮಹರ್ಷಿ ಪತಂಜಲಿ ಯೋಗ ಸೂತ್ರ ಎಂಬ ಗ್ರಂಥದ ಮೂಲಕ ಶ್ರೀಸಾಮಾನ್ಯನನ್ನು ತಲುಪಿತು ಇದರಲ್ಲಿ ಮಹರ್ಷಿ ಪತಂಜಲಿಯವರು ಅಷ್ಟಾಂಗ ಯೋಗ ವನ್ನು ಆರೋಗ್ಯ ವರ್ಧನೆಗೆ ಆನಂದ ಸ್ಥಿತಿ ತಲುಪಲು ಹಾಗೂ ಮೋಕ್ಷ ಸಾಧಿಸಲು ಪ್ರತಿಪಾದಿಸಿದ್ದಾರೆ. ಚಂಚಲವಾದ ಮನಸ್ಸನ್ನು ಶಾಂತಗೊಳಿಸಲು ಮತ್ತು ವಂಶಪಾರಂಪರ್ಯದಿಂದ ಬಂದಿರುವ ರೋಗಗಳನ್ನು ವಾಸಿ ಮಾಡಿಕೊಳ್ಳಲು ಯೋಗ್ಯ ಯೋಗಾಭ್ಯಾಸದಿಂದ ಉತ್ತಮ ಫಲಿತಾಂಶ ನಿರೀಕ್ಷಿಸುವುದು ಜನರ ಲಕ್ಷಣವೇ ಯೋಗ್ಯವಲ್ಲವೆಂದು ಆಸಕ್ತಿಯ ಮನುಷ್ಯನಿಗೆ ಸಂಬಂಧಿಸಿದ್ದಲ್ಲ ರೋಗ ಪ್ರತಿಬಂಧಕ ಶರೀರ ಹೊಂದಲು ಮಾನಸಿಕ ಸಂಯಮ ಬುದ್ಧಿಯ ವಿಕಾಸ ಆಧ್ಯಾತ್ಮಿಕ ಸಾಧನೆ ಏಕಾಗ್ರತೆ ಆನಂದದ ಅನುಭವ ಹೀಗೆ ಜೀವನದ ಜನಗಳಿಗೆ ಗುರಿಯನ್ನು ತಲುಪಲು ಸಹಕಾರಿಯಾಗುತ್ತದೆ.

Continue reading

ಹಳ್ಳಿ ಜೀವನ ಸುಲಭ ಅಲ್ವಾ!!!

ಅಪ್ಪ ಇಬ್ಬರು ಮಕ್ಕಳು ಹಳ್ಳಿಲೇ ಇದ್ರೆ ಇರೋ ನಾಲ್ಕು ಎಕರೇಲಿ ಬದುಕೋದು ಕಷ್ಟ ಆಗುತ್ತೆ ಅನ್ನೋ ಕಾರಣಕ್ಕೆ ಒಬ್ಬ ಮಗನಿಗೆ ಒಳ್ಳೆ ವಿದ್ಯೆ ಕಲಿಸಿ ಕೆಲಸ ಸಿಗೋ ಹಾಗೆ ಮಾಡಿ ಪೇಟೆ ಸೇರಿಸಿಬಿಟ್ಟ. ಪೇಟೆಯಲ್ಲಿ ಬದುಕೋಕೆ ಬೇಕಾಗೋ ಎಲ್ಲಾ ವ್ಯವಸ್ಥೆಯ ಖರ್ಚನ್ನು ಸಾಲಸೂಲ ಮಾಡಿ ಭರಿಸಿದ್ದಾಯ್ತು. ಓಡಾಡೋಕೊಂದು ಬೈಕು, ಮನೆಗೆ ಬೇಕಾಗೋ ಫರ್ನಿಚರ್ ಗಳು, ಬೆಲೆಬಾಳೋದೊಂದು ಸೈಟು ಕೊಡಿಸಿ ಮದುವೆ ಮಾಡೋಕೆ ಹಳ್ಳಿಯ ದುಡ್ಡನ್ನೇ ವಿನಿಯೋಗಿಸಿ ಖರ್ಚು ಹಾಕ್ಕೊಂಡಿದ್ದಾಯ್ತು.

Continue reading

ಮರೆತು ಬಿಟ್ಟರೆ ಗತಿಯೇನು?

ಒಮ್ಮೆ ದೇವತೆಗಳ ರಾಜನಾದ ಇಂದ್ರನು ಯಾಕೋ ರೈತರ ಮೇಲೆ ಸಿಟ್ಟು ಮಾಡಿಕೊಂಡು, “ಇನ್ನು 12 ವರ್ಷಗಳು ಮಳೆ ಸುರಿಸುವುದಿಲ್ಲ. ಇಲ್ಲಿ ಬಿತ್ತನೆ ಮಾಡಿದರೂ ಬೆಳೆಯುವುದಿಲ್ಲ”
ಎಂದು ಶಪಿಸಿ ಬಿಟ್ಟನು.

Continue reading

ಸಾವಿನ ಹೊಣೆ

ಸುಂದರವಾದ ನಗುಮುಖದೊಂದಿಗೆ ಮನಸು ಕದ್ದ, ಪ್ರೌಢ ಅಭಿನಯದೊಂದಿಗೆ ಗೌರವ ಗಳಿಸಿದ, ಭಾವುಕ, ಹಮ್ಮು – ಬಿಮ್ಮು ಇಲ್ಲದ, ತಾರಾ ವರ್ಚಸ್ಸು ತಲೆಗೇರದ ತಾರೆಯಾಗಿದ್ದರು ಸುಶಾಂತ್ ಸಿಂಗ್ ರಜಪೂತ್ ರವರು ಎಂದು ಈಗ ಎಲ್ಲರೂ ಹಾಡಿ ಹೊಗಳುವವರೇ. ಈ ಘಟನೆಯ ಬಗ್ಗೆ ಓದಿದಾಗಿನಿಂದ ಒಂದೇ ಸಮನೆ ಸಂಕಟ ಮನಸಿನಲ್ಲಿ. ಕೆಲಸವಿತ್ತು, ಏನೇನೋ ಓದಿದೆ, ಒಂದು ಆನ್ಲೈನ್ ಮದುವೆಯಲ್ಲೂ ಭಾಗವಹಿಸಿದೆ. ಆದರೂ ಕೊರೆಯುತ್ತಿರುವ ಈ ವಿಚಾರದಿಂದ ಹೊರ ಬರಲು ಆಗಲೇ ಇಲ್ಲ. ಅದಕ್ಕೆ ಮನಸು ಹಗುರಾಗಿಸಿಕೊಳ್ಳಲು ಇಲ್ಲಿ  ಬರೆಯುತ್ತಿದ್ದೇನೆ. 

Continue reading

ದುಬಾರಿ ಗಡಿಯಾರ!!

ಒಂದು ಕ್ಲಾಸ್ ರೂಮ್ ನಲ್ಲಿ ಸುಮಾರು ವಿದ್ಯಾರ್ಥಿಗಳಿದ್ದರು. ಅವರಲ್ಲಿ ಒಬ್ಬ ಎದ್ದು ನಿಂತು ಪ್ರೊಫೆಸರ್ ಗೆ ಹೇಳಿದ ಸರ್ ನನ್ನ ತಂದೆ ನನ್ನ ಜನ್ಮ ದಿನಕ್ಕೆ ಒಂದು ದುಬಾರಿ ಗಡಿಯಾರವನ್ನು ಉಡುಗೊರೆಯಾಗಿ ಕೊಟ್ಟಿದ್ದರು. ಈ 5 ನಿಮಿಷದ ಬ್ರೇಕ್ ನಲ್ಲಿ ಅದನ್ನು ಇಲ್ಲಿಯೇ ಬಿಟ್ಟು ಹೊರಗೆ ಹೋಗಿದ್ದೆ, ಬಂದು ನೋಡಿದರೆ ಕಾಣುತ್ತಿಲ್ಲ. ಆಗ ಪ್ರೊಫೆಸರ್ ವಿಚಾರ ಮಾಡಲಾಗಿ ಈ ಹುಡುಗ ಹೊರಗೆ ಹೋಗಿ ಒಳಗೆ ಬರುವವರೆಗೆ ಕ್ಲಾಸ್ ರೂಮ್ ಒಳಗಿರುವ ಯಾವನೋ ಒಬ್ಬ ಕದ್ದಿರುತ್ತಾನೆ ಎಂದು ಊಹಿಸಿದರು.

Continue reading

SSLC SCIENCE PPTS 2019_20

Stay home Stay Safe Stay Learning